ಹೀಗೆಯೇ ಎಷ್ಟೋ ದಿನ ಯೋಚಿಸುತ್ತೇನೆ. ಲೇಖಕರಿಗಾಗಿ ಮಾತ್ರವಲ್ಲ, ಕಲಾವಿದರ ಬಗ್ಗೆ ನಾನು ಯಾವತ್ತೂ ಹೀಗೆಯೇ ಯೋಚಿಸುತ್ತೇನೆ. ಅವರ ವೈಯಕ್ತಿಕ ಬದುಕು ತೆರೆಯ ಮುಂದೆ ಬಾರದೇ ತೆರೆಯ ಹಿಂದೂ ಸಿಗದೆ ಸುಮ್ಮನೆ ಹೀಗಿರಬಹುದಾ ಅಂತ ಊಹಿಸುತ್ತಲೋ, ಹೀಗಿರಲಿ ಅಂತ ಹಾರೈಸುತ್ತಲೋ ಇರುವಷ್ಟು ಮಾತ್ರ ನನ್ನಂಥ ಅಭಿಮಾನಿಯೊಬ್ಬಳಿಗೆ ದಕ್ಕಬೇಕು. ಅಚಾನಕ್ಕಾಗಿ ದೇವರಂತೆ ಪ್ರತ್ಯಕ್ಷ್ಯವಾಗಿಬಿಡಬೇಕು ಕಲಾವಿದ ಅಂತ ಯೋಚಿಸುತ್ತಿರುವಾಗ ಸುತ್ತ ನೋಡಿದರೆ ನಾನೊಬ್ಬಳೇ ಬೆಪ್ಪುಬೆಪ್ಪಾಗಿ ಯೋಚಿಸುವವಳಂತೆ ಅನ್ನಿಸಿ ಸುಮ್ಮನಾಗುತ್ತೇನೆ, ಸಾಕು ಸುಮ್ಮನಿರು ಅಂತ ಮನಸ್ಸಿಗೆ ಬುದ್ಧಿ ಹೇಳಿ ಒಬ್ಬನ ವೈಯಕ್ತಿಕ ನಿಲುವಿಗೆ ನಿಲುಕಲಾರದ ಈ ವಿಷಯದ ಬಗ್ಗೆ ಹೀಗೊಂದು ನಿಯಮವನ್ನೇ ನಿರ್ಧರಿಸಿಬಿಡುವುದು ಒಳ್ಳೆಯದಲ್ಲ ಅಂತ ನನ್ನನ್ನೇ ನಾನು ಸುಮ್ಮನಿರಿಸುತ್ತೇನೆ.
ಇವತ್ತು ಖುಷಿಯಾಗಿದೆ. ನಾನು ನನ್ನೊಳಗೆ ಸದಾ ಯೋಚಿಸಿದಂತೆ ಒಬ್ಬರು ಬರೆದಿದ್ದಾರಲ್ಲ ಎನ್ನುವ ಖುಷಿಗಿಂತಲೂ ಹೀಗೆ ಯೋಚಿಸುವವರು ಇದ್ದಾರೆ ಎನ್ನುವ ಸಮಾಧಾನ ಹೆಚ್ಚಾಗಿದೆ. ಕಾರ್ತಿಕ್ ಅವರ ವೈಯಕ್ತಿಕ ಪರಿಚಯ ನನಗಿಲ್ಲ. ಆದರೆ ಕಾರ್ತಿಕ್ ಎಂಬ ಲೇಖಕರೊಬ್ಬರ ಯೋಚನೆಗಳಿಗೆ ಅಭಿಮಾನಿಯಾಗುತ್ತ ಕಾರ್ತಿಕ್ ಬರೆದ ‘ಅಚಾನಕ್ಕಾಗಿ ದೇವರಂತೆ ಪ್ರತ್ಯಕ್ಷ್ಯವಾಗಿಬಿಡಬೇಕು ಲೇಖಕ’ ಲೇಖನವನ್ನು ನನ್ನ ಬ್ಲಾಗಲ್ಲಿಯೂ ಇಟ್ಟುಕೊಳ್ಳುತ್ತಿದ್ದೇನೆ. ಹೀಗೆ ಮಾಡುತ್ತಿದ್ದೇನೆಂದರೆ ಕಾರ್ತಿಕ್ ಅವರ ಯೋಚನೆಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಮಾತ್ರವೇ ಅಂತಲ್ಲ, ನನ್ನ ಯೋಚನೆಗಳಿಗೆ ಸಿಕ್ಕ ಬೆಂಬಲದ ಬಗೆಗಿನ ಖುಷಿಯೂ ಮತ್ತು ಧನ್ಯವಾದವೂ ಇದರಲ್ಲಿದೆ. ಅದಕ್ಕಾಗಿಯೇ ನನ್ನೀ ಬರಹಕ್ಕೂ ಕಾರ್ತಿಕ್ ಅವರ ಲೇಖನದ ಶೀರ್ಷಿಕೆಯನ್ನೇ ಇಟ್ಟಿದ್ದೇನೆ.
ನೆನಪನ್ನೆಲ್ಲಾ ಉಳಿಸಿಕೊಳ್ಳುತ್ತಾ,
ಕನಸಲೂ ನೆನಪನೇ ಗಳಿಸುತ್ತಲಿಹ
ಆಂತರ್ಯದ ನಡುವಣ ವಾಸ್ತವಸೇತುವೆಗೆ
ಹೆಸರಿಡಲಾಗದೇ ಹೆಸರು
"ನೆನಪು ಕನಸುಗಳ ನಡುವೆ"
February 27, 2010
February 10, 2010
ಸುಮ್ಮನೆ ಉಕ್ಕಿದ ತೆರೆ...
ನನ್ನನ್ನೇ ನಾನು ಇಕ್ಕಟ್ಟಿನೊಳಗೆ ಬಿಚ್ಚಿಟ್ಟುಕೊಂಡೇನೆಂಬ ಭಯಕ್ಕೆ ನಾನು ಕೆಲವೊಮ್ಮೆ ಸುಮ್ಮನಾಗುತ್ತೇನೆ ಹೊರತು ಅದು ಮೌನವಲ್ಲ. ಪ್ರತಿಯೊಂದಕ್ಕೂ ಕಾರಣ ಹುಡುಕುವ ನಿನಗೆ ನಾನು ಸುಮ್ಮನೇ ಇದ್ದಿದ್ದೇ ನಾನು ಮಾತನಾಡದೇ ಇರುವುದಕ್ಕೆ ಕಾರಣ ಅಂತ ಅನ್ನಿಸಿದರೆ ಸಹಜ.
ಯಾಕೆ? ನಿನ್ನ ಪ್ರಶ್ನೆಗಳಿಗೆ ನಾನು ಉತ್ತರಿಸಿಯೇ ಇಲ್ಲವ? ‘ಎಲ್ಲಿ ಹೋಗಿದ್ದೆ ಇಷ್ಟು ಹೊತ್ತು?’ ಅಂತ ನೀ ಕೇಳಿದ ಪ್ರಶ್ನೆಗೆ ನಾನು ಉತ್ತರಿಸಿದ್ದೆ ‘ಲೊಕೇಶನ್ನ ನೋಡೋಕೆ’ ಅಂತ. ನೀನು ‘ ಲೋಕೇಶ್ ಅಂದ್ರೆ ಯಾರು?’ ಅಂತ ಕೇಳಿದ್ದಕ್ಕೆ ನಾನಾಗಿದ್ದಕ್ಕೆ ನಗಲಿಲ್ಲ. ನಾನು ಹೇಳಿದ್ದು ಶೂಟಿಂಗಿಗೆ ಲೊಕೇಶನ್ನು ನೋಡೋಕೆ ಅಂತ. ನೀನಂದುಕೊಂಡಿದ್ದು ಲೋಕೇಶ ಅನ್ನೋ ವ್ಯಕ್ತಿಯನ್ನ ನೋಡೋಕೆ ಅಂತ. ಮಾತಿಗಿರುವ ಅರ್ಥ ಎಂದರೆ ಇದೇ ಇರಬೇಕು. ಮಾತು ಆಡುವವನೊಳಗೊಂದರ್ಥ ಕೇಳುವವಗೊಂದರ್ಥ ಕೊಡುತ್ತದೆ ಎಂದರೆ ಇಂಥದೇ ಹೊತ್ತುಗಳಲ್ಲಿ ನಾನು ನಂಬುತ್ತೇನೆ. ಇದೇ ಕಾರಣಕ್ಕೆ ನಾನು ಯಾವುದಕ್ಕೂ ಕಾರಣಗಳನ್ನು ಹುಡುಕುವುದಿಲ್ಲ.
ಅಕ್ಕಿ ಒಬ್ಬನಿಗೆ ಅನ್ನವಾದರೆ ಇನ್ನೊಬ್ಬನಿಗೆ ಅಕ್ಷತೆಯಾಗುತ್ತದೆ. ಅಕ್ಷರವೂ ಹಾಗೆಯೇ.
ಆಯಾವ್ಯಕ್ತಿಗಳಿಗನುಗುಣವಾಗಿ ವಸ್ತುಗಳ ಬಳಕೆ. ಪದಗಳೂ ಹಾಗೆಯೇ. ಮಾತೂ ಅಷ್ಟೇ. ಯಾವುದೇ ಆಗಲಿ ಸದ್ಯುಪಯೋಗವಾಗಲಿ. ಇಕ್ಕಟ್ಟಿನೊಳಗೆ ಬಿಚ್ಚಿಕೊಳ್ಳಲು ಯತ್ನಿಸುವ ಬಲಪ್ರಯೋಗ ಬೇಡ. ಬಯಲಿಗೆ ಬಾ, ನೀನಾಗಿಯೇ ತೆರೆದುಕೊಳ್ಳುತ್ತೀಯ, ವಿಶಾಲವಾಗುತ್ತೀಯ. ಸಹನೆಯ ಕಟ್ಟೆ ಈಗ ಒಡೆಯುತ್ತಿರಬೇಕು ಅಂದುಕೊಳ್ಳಬೇಡ, ಕಟ್ಟೆ ಒಡೆಯುವುದಕ್ಕೆ ಅದರೊಳಗೆ ಸಹನೆಯೇ ಇಲ್ಲ ಎಂಬ ಸತ್ಯವೂ ನಿನಗೆ ಗೊತ್ತಿರಲಿ.
ಆ ಕಲ್ಲು ಬೆಂಚಿನ ಆಚೆ ಚರಂಡಿ ಇದೆ ಅಂತ ಹೇಳಿದಾಗಲೇ ನೀನು ಅರ್ಥಮಾಡಿಕೊಳ್ಳಬಹುದಿತ್ತು, ಆ ಕಲ್ಲುಬೆಂಚಿನ ಮೇಲೆ ಕುಳಿತುಕೊಳ್ಳಬಾರದು ಅಂತ. ಎಲ್ಲವನ್ನೂ ಬಿಡಿಸಿ ಬಿಡಿಸಿ ಹೇಳುವುದಕ್ಕೆ ನನ್ನಿಂದ ಅಸಾಧ್ಯ ಎಂಬ ದೌರ್ಬಲ್ಯವನ್ನೇ ನೀನು ಬಳಸಿಕೊಂಡು ನಾನಾಡಿದ ಪ್ರತಿಪದವನ್ನೂ ಬಿಡಿಬಿಡಿಸಿ ನಿನ್ನದೇ ಅರ್ಥಗಳನ್ನು ಕಲ್ಪಿಸಿಕೊಳ್ಳುವುದು. ಇದ್ಯಾವುದಕ್ಕೂ ನನ್ನ ತಕರಾರಿಲ್ಲ. ಇದ್ದುದನ್ನು ಇದ್ದ ಹಾಗೆಯೇ ಸ್ವೀಕಾರ ಮಾಡುವ ಜಾಯಮಾನ ನನ್ನದು. ಬದಲಾವಣೆ ಜಗದ ನಿಯಮ, ಇರಬಹುದು. ಆದರೆ ಇದ್ದುದೆಲ್ಲ ಇದ್ದ ಹಾಗೆಯೇ ಇದ್ದರೆ ನನ್ನ ತಕರಾರಿಲ್ಲ, ಬದಲಾವಣೆ ನನಗೆ ಬೇಕಾಗಿಯೇ ಇಲ್ಲ. ತಣ್ಣನೆಯ ಗಾಳಿ ಬೀಸಿ ನನ್ನೆಡೆಗೆ ಹರಿದುಬಂದರೆ ಖುಷಿಯೇ. ಸುಮ್ಮನೆ ಉಕ್ಕುವ ತೆರೆ ನನ್ನೆಡೆಗೆ ಬಂದರೆ ಖುಷಿಯೇ. ಆದರೆ... ಇವೆಲ್ಲವೂ ನನ್ನನ್ನು ಖುಷಿಗೊಳಿಸಲೇ ಬಂದಿದ್ದು ಅಂದುಕೊಳ್ಳುವಷ್ಟು ವಾಸ್ತವಕ್ಕೆ ದೂರವಾಗಿ ನಾನಿಲ್ಲ. ತಣ್ಣನೆಯ ಗಾಳಿ, ತೆರೆ ಎಲ್ಲವೂ ನಿಸರ್ಗ. ಅದರೊಳಗೆ ನಾನೊಬ್ಬಳು. ಪುಟ್ಟ ತೆರೆಯೂ ಅಲ್ಲ, ತಣ್ಣನೆಯ ಒಂದು ಸಣ್ಣ ಅಲೆಯೂ ಅಲ್ಲ.
ಸಂಜೆಯಾಗುತ್ತಿದೆ, ತೆರೆಗಳು ಮರಳುವ ಮೊದಲು ಮನೆಗೆ ತೆರಳಲೇಬೇಕು. ಒಲೆಯಮೇಲಿನ ಅಕ್ಕಿ ಅಗುಳಾಗಿ ಅರಳುತ್ತಿರಬೇಕು.
ಪಾತ್ರವೊಂದನ್ನು ಸೃಷ್ಟಿಸಿಬಿಟ್ಟರೆ ಕತೆಗಾರನ ಕೆಲಸ ಮುಗಿದಂತಲ್ಲ. ಸೃಷ್ಟಿಯಷ್ಟೇ ಸುಂದರವಾದ ಹಂದರವೊಂದನ್ನು ರೂಪಿಸುವ ತಾಳ್ಮೆ ಕೊನೆಯತನಕವೂ ಇರಬೇಕು. ಹಾಗೆಯೇ ಒಲೆಯಮೇಲೊಂದು ಪಾತ್ರೆ ಇಡುವಾಗಿನ ತಾಳ್ಮೆ ಇಳಿಸುವಾಗಲೂ ಇರಬೇಕು. ಅದಕ್ಕಾಗಿಯೇ ನಾನು ಮತ್ತೆ ತೆರಳುತ್ತಿದ್ದೇನೆ, ಒಲೆಯಮೆಲಿನ ಪಾತ್ರೆಯನ್ನು ಇಳಿಸಬೇಕೀಗ, ಸೀದಲುಬಿಡಬಾರದು, ಮತ್ತೆ ಸಿಗುತ್ತೇನೆ.

Subscribe to:
Posts (Atom)
ನಿನ್ನ ಪ್ರೀತಿಗೆ ಅದರ ರೀತಿಗೆ...
ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.
ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...