ಟ್ರೇನಿಗೆ ಕೊಂಡಿದ್ದು ಓಪನ್ ಟಿಕೆಟ್
ಎಷ್ಟು ಹೊತ್ತಿಗೆ ಹೊರಡುವೆನೋ ಗೊತ್ತಿಲ್ಲ
ಟಿಕೆಟ್ ಕೊಟ್ಟವನಿಗೂ ಗೊತ್ತಿಲ್ಲ
ಹೊರಡುವ ಸಮಯ ನಿಗಧಿಯಾಗಬೇಕಷ್ಟೇ
ಟ್ರೇನಿಗೂ ನನಗೂ
ಬೆಳಗಿನ ಬಿಸಿಕಾಫಿ
ಸಂಜೆತನಕ ಇರಬೇಕೆಂದರೆ...
ಸುಮ್ಮನೆ ತಮಾಷೆ ಬೇಡ
ಆರಿದ್ದು ಕಾಫಿಯಲ್ಲ ಕೋಲ್ಡ್ ಕಾಫಿ
ಕುಡಿ ಬೇಗ ಟ್ರೇನ್ ಎಷ್ಟೊತ್ತಿಗೆ ಹೊರಡುವುದೋ ಗೊತ್ತಿಲ್ಲ
ಕಪ್ಪುಬಿಳುಪಿನ ಬೋರ್ಡು
ಟ್ರೇನಿಗೆ ಸೂಟಾಗುವುದಿಲ್ಲ
ಟ್ರೇನಿಗೂ ಬೋರ್ಡಿಗೂ ಸೂಟಾಗಬೇಕಿಲ್ಲ
ಹೊಸಬಣ್ಣ ಬಳಿಯಬೇಕು
ಬಿಡಿಸಿಟ್ಟ ಬೋರ್ಡಿಗೆ ಬಣ್ಣ ಬಳಿಯುವುದು ಹೇಗೆ?
ಬೋರ್ಡೇ ಟ್ರೇನಲ್ಲ ನೋಡು
ಟ್ರೇನಿನ ಬೋರ್ಡು
ಬಣ್ಣವಾಗಿದ್ದರೆ ಮಾರ್ಕೆಟ್ಟು
ಕಾಡಿಗೆ ಹೋಗುವ ಹಾದಿ
ಸಂತೆಯೊಳಗೆ ಸಿಗುತ್ತದೆಯೇ?
ತಲೆಬಿಸಿಯಿಲ್ಲ
ಕೊಂಡ ಟಿಕೆಟ್ ಓಪನ್ನು
ಸಮಯ ಇನ್ಯಾವುದೋ ಒಂದು
ಹೊರಟಾದ ಮೇಲೆಯೇ ಗೊತ್ತು
ಯಾವಾಗ ಹೊರಡುತ್ತೇವೋ ಎಂದು
ಸಮಯ ತನ್ನಷ್ಟಕ್ಕೆ ನಿಗಧಿಯಾಗುತ್ತದೆ
ಟ್ರೇನು ಹೊರಡುತ್ತದೆ
ಟಿಕೆಟ್ಟಿನ ಬೆಲೆ ಕೊಂಡವರಿಗೆ ಮಾತ್ರ
ಕೊಟ್ಟವರಿಗಲ್ಲ
ಹೊರಡುವ ಮುನ್ನ ಯಾರೂ ಸೀಟಿ ಊದುವುದಿಲ್ಲ
May 21, 2009
May 18, 2009
ಗಣೇಶನ್ನ ಮಾಡ್ರಿ ಅಂದ್ರೆ ಅವರಪ್ಪನ್ನ ಮಾಡಿದೀರ ಅಂದ್ರೆ ನಿಮಗೆ ಕೋಪ ಬರತ್ತ?
ಮಿಂಚಿ ಮಿನುಗಿದವರು ಮತ್ತು ಮಿಂಚುತ್ತಿರುವವರು...
ತಮ್ಮ ಐದನೆಯ ವಯಸ್ಸಿನಲ್ಲಿ ಹಾಡುಗಾರರಾಗಿ ವೇದಿಕೆಗೆ ಬಂದ ಚಾರ್ಲಿ ಚಾಪ್ಲಿನ್ ಎಪ್ರಿಲ್ ೧೬, ೧೮೮೯ ಇಂಗ್ಲೆಂಡಿನಲ್ಲಿ ಜನಿಸಿದ ಇವರು ಮುಂದೆ ಹಾಸ್ಯನಟರಾಗಿ ಜಗತ್ಪ್ರಸಿದ್ಧರಾದರು. ತೆವಳುತ್ತಲಿದ್ದ ಚಲನಚಿತ್ರರಂಗವನ್ನು ಹಿಡಿದೆತ್ತಿ ನಿಲ್ಲಿಸಿದ ಕೀರ್ತಿ ಚಾಪ್ಲಿನ್ ಅವರನ್ನೂ ಸಂದುತ್ತದೆ.
ಹಳತೆನಿಸಿದರೂ ಕಣ್ಣುಗಳಲ್ಲಿ ಹೊಸತಾಗಿಯೇ ಇದ್ದುಬಿಡುವ ಕಪ್ಪುಬಣ್ಣಕ್ಕಿಷ್ಟು ಮಾಸಲು ಬಳಿದಿರುವಂಥ ಚಾರ್ಲಿಯ ಕೋಟು, ಆ ಪ್ಯಾಂಟು, ಆತನ ತಲೆಯಲ್ಲೊಮ್ಮೆ, ಕೈಯಲ್ಲೊಮ್ಮೆ ಆಡುವ ಮರೆಯಲಾಗದೇ ನಮ್ಮನ್ನೇ ಸುತ್ತಿಕೊಳ್ಳುವ ಸುತ್ತಾವರಿ ಟೋಪಿ, ಮೇಲ್ದುಟಿಗಂಟಿಕೊಂಡು ಕುಣಿಯುತ್ತಲಿರುವ ಚೋಟುದ್ದದ ಮೀಸೆ, ಕೈಯಲ್ಲೊಂದು ವಿವಿಧ ಕೆಲಸಮಾಡುವ ವಾಕಿಂಗ್ ಸ್ಟಿಕ್. ಚಾಪ್ಲಿನ್ ಚಿತ್ರಗಳನ್ನು ಕಂಡವರಿಗೆ ಆತನ ನೆನಪೊಂದು ಇಷ್ಟೂ ಹೊತ್ತು ನಮ್ಮೊಡನಿದ್ದು ಈಗಷ್ಟೇ ಎದ್ದುಹೋದ ಆಪ್ತ ಗೆಳೆಯನ ಹಾಗೆ.
ಚಾಪ್ಲಿನ್ ಅಪ್ಪನ ಅಲೆಯುವ ಹಾಡನ್ನಾಲಿಸಿದರೋ ಬಿಟ್ಟರೋ, ಹಾಡುಗಾರ್ತಿ ಅಮ್ಮ ಹೆನ್ಹಾ ಹಾಲ್ ಜೊತೆ ಬಾಲ್ಯ ಕಳೆದ ಚಾರ್ಲಿ ಬೆಳೆದದ್ದು ಆರ್ಥಿಕ ಬಡತನದಲ್ಲಿಯೇ. ಮೂಲತಃ ಹಾಡುಗಾರ್ತಿಯಾಗಿದ್ದ ಚಾರ್ಲಿಯ ತಾಯಿ ಹೆನ್ಹಾ ವೇದಿಕೆಯೊಂದರಲ್ಲಿ ಹಾಡುತ್ತ ತಮ್ಮ ಧ್ವನಿಕಳೆದುಕೊಂಡು ಹಾಡಲಾರದೇ ನಿಲ್ಲಿಸಿದ ಅರ್ಧಹಾಡನ್ನು ಐದುವರ್ಷದ ಬಾಲಕ ಚಾರ್ಲಿ ಹಾಡಿಮುಗಿಸಿದ್ದು ಕಥೆಯಲ್ಲ, ಕೇಳಿದವರ ಕಣ್ಣೀರೂ ಅಲ್ಲ, ಅದು ಆತನ ಬದುಕು. ಹಾಡಲಾಗದೇ ಹಾಡಿನ ಹೆಸರಾಗಿ ಮಾತ್ರ ಉಳಿದ ತಾಯಿ ಹೆನ್ಹಾ ಹಾಲ್ ಳ ಹೆಸರನ್ನೇ ಬಳಸಿಕೊಳ್ಳುತ್ತ ತನ್ನಮ್ಮ ಹಾಡಿದ ವೇದಿಕೆಗಳಲ್ಲೆಲ್ಲ ತಮ್ಮ ಧ್ವನಿ ತೆರೆದಿಡುತ್ತ ಎಂಟನೆಯ ವಯಸ್ಸಿನಲ್ಲಿ ಹಾಡುಗಾರ ಎನಿಸಿಕೊಂಡರು.
ತಮ್ಮ ಬದುಕಿನ ಮುಂದಿನ ದಿನಗಳಲ್ಲಿ ಚಾಪ್ಲಿನ್ ನಟಿಸಿದ ಪ್ರಥಮಚಿತ್ರ Making a Living ೧೯೧೪ರಲ್ಲಿ ಬಿಡುಗಡೆಯಾದದ್ದು ಸೋಲನ್ನು ತರಲಿಲ್ಲ. ನಟರಾಗಿ ಚಿತ್ರರಂಗಕ್ಕೆ ಬಂದ ಚಾರ್ಲಿ ೧೯೧೫ರಲ್ಲಿ The Tramp ಚಿತ್ರವನ್ನು ಸ್ವಥಹ ತಾವೇ ನಿರ್ದೇಶಿಸುವಲ್ಲಿ ಯಶಸ್ವಿಯಾದರು. ಮುಂದೆ ತಮ್ಮ ಚಿತ್ರಕ್ಕೆ ರೈಟರ್, ಪ್ರೊಡ್ಯೂಸರ್, ಡೈರಕ್ಟರ್, ಕಂಪೋಸರ್ ಎಲ್ಲವೂ ತಾವೇ ಆಗುತ್ತ ಹಲವುಪಾತ್ರಗಳನ್ನು ನಿಭಾಯಿಸುವಲ್ಲಿ ಹಾಸ್ಯನಟರಾಗಿ ಪ್ರಸಿದ್ದಿಪಡೆದರು. City Lights ೧೯೩೫ರಲ್ಲಿ ಬಿಡುಗಡೆಯಾದ ಚಾಪ್ಲಿನ್ ಅವರು ನಿರ್ದೇಶಿಸಿದ ಪ್ರಥಮ ಮೂಕಿಚಿತ್ರ. ಚಾಪ್ಲಿನ್ ಕೊನೆಯ ಚಿತ್ರ A Countess from Hong Kong ೧೯೬೬ರಲ್ಲಿ ಬಿಡುಗಡೆಯಾಯಿತು. ಅಲ್ಲಿಂದ ಇಲ್ಲಿಯತನಕವೂ ಚಾಪ್ಲಿನ್ ತಮ್ಮ ಅಭಿನಯದಿಂದ ವೀಕ್ಷಕರನ್ನೊಮ್ಮೆ ಅಳಿಸಿದರೂ ಮತ್ತೆ ನಗಿಸುವ ಭಾರವನ್ನೂ ತಾವೇ ಹೊತ್ತವರು.
೧೯೧೮ರಲ್ಲಿ ಮಿಲ್ಡ್ರೆಡ್ ಹ್ಯಾರೀಸ್ ಎಂಬ ಹದಿನಾರುವರ್ಷದ ಯುವತಿಯನ್ನು ಚಾರ್ಲೀ ವಿವಾಹವಾದರು. ಆರುವರ್ಷಗಳ ತರುವಾಯ ಲೀಟಾ ಗ್ರೆ ಎಂಬ ಯುವತಿಯನ್ನು ವಿವಾಹವಾದರು. ಈ ಎರಡೂ ವಿವಾಹಗಳು ವಿಚ್ಛೇದನದೊಂದಿಗೆ ಅಂತ್ಯವಾದವು. ಚಾರ್ಲಿಯ ಮೂರನೆಯ ಮಡದಿಯೇ ಚಿತ್ರನಟಿ ಪೌಲೆಟ್. ನಾಲ್ಕನೆಯ ಮಡದಿ ಊನಾ ಹಾಗೂ ಮಕ್ಕಳೊಂದಿಗೆ ಚಾಪ್ಲಿನ್ ಸ್ವಿಡ್ಜರ್ ಲ್ಯಾಂಡ್ ಗೆ ತೆರಳಿದ್ದು ೧೯೫೨ರ ನಂತರದಲ್ಲಿ. ಒಂಬತ್ತುಮಕ್ಕಳ ತಂದೆಯಾಗಿದ್ದರು ಚಾಪ್ಲಿನ್. ಹೀಗೆ ಚಾರ್ಲಿ ಬದುಕಿದ ಬದುಕೋ, ಬಾಳಿದ ಬಾಳ್ವೆಯೋ...ಹಿಂದೆಹರಿಯುತ್ತ ಹೋದರೆ ತೆರಯ ಮೇಲೆ ಕಂಡಂಥ ಅಳು-ನಗುವಿನ ಸಮಾಗಮವೇ ತೆರೆಯ ಹಿಂದೆಯೂ ಕಾಣುವುದು. ೧೯೭೭ ಡಿಸೆಂಬರ್ ೨೫ರಲ್ಲಿ ಚಾರ್ಲಿ ಚಾಪ್ಲಿನ್ ತೆರೆಯ ಹಿಂದಿನಿಂದ ಕಣ್ಮರೆಯಾಗಿ ತೆರೆಯಮೇಲೆ ಮಾತ್ರ ಉಳಿದರು. ಅನೇಕ ಮನಸ್ಸುಗಳು ತಮ್ಮೊಳಗಿನ ಜೀವಂತ ಚಾಪ್ಲಿನ್ ನನ್ನು ಕಳಿಸಿಕೊಡದೇ ಚಾಪ್ಲಿನ್ ಹಲವಾರು ಮನಗಳಲ್ಲಿ ಉಳಿದುಬಿಟ್ಟರು.
ಚಾಪ್ಲಿನ್ ನ ಮೂಕಾಭಿನಯ, ಆಂಗಿಕ ಹಾವಭಾವಗಳು ಜನಮನದಲ್ಲಿ ಹೂತುಹೋದವು. ಹುಬ್ಬು, ಮೀಸೆ ಮುಖಚರ್ಯೆ, ಹಾವಭಾವಗಳಲ್ಲೇ ಮಾತಿಲ್ಲದೇ ಮೋಡಿಮಾಡಿದರು. ಬಾಯಿ, ತುಟಿ, ಕಂಠ ಮಾತ್ರವಲ್ಲದೇ ಇಡಿಯ ದೇಹಕ್ಕೂ ಮಾತಾಡಬಲ್ಲ ಶಕ್ತಿಯಿದೆ ಎಂಬುದನ್ನು ತೋರಿಸಿಕೊಟ್ಟರು. ಆ ಮಾಂತ್ರಿಕ ನಟನೆ ಜನರನ್ನು ಮಂತ್ರಮುಗ್ಧರನ್ನಾಗಿಸಿತು. ಅಳಿದರೂ ಉಳಿಹೋದರು ಚಾಪ್ಲಿನ್. ಅವರ ಸ್ಥಾನವನ್ನು ಅಲ್ಪಮಟ್ಟಿಗೆ ತುಂಬಿಕೊಂಡರು ಮಿ.ಬೀನ್.
ಚಾಪ್ಲಿನ್ ಭೌತಿಕವಾಗಿ ಮರೆಯಾದರೂ ಅವರ ಸ್ಥಾನವನ್ನಿಷ್ಟು ತುಂಬಿಕೊಟ್ಟವರು ಮಿ. ಬೀನ್ ಎಂದೇ ಪ್ರಖ್ಯಾತರಾದ ರೊವನ್ ಆಟ್ಕಿನ್ ಸನ್. ಇವರು ಹುಟ್ಟಿದ್ದು ಜನವರಿ ೬, ೧೯೫೫ರಲ್ಲಿ. ಇಂಗ್ಲೆಂಡಿನ ನ್ಯೂ ಕ್ಯಾಸಲ್ ಎಂಬಲ್ಲಿ. ಐದು ಅಡಿ ಹತ್ತುಮುಕ್ಕಾಲು ಇಂಚಿನಷ್ಟು ಎತ್ತರವಿರುವ ಇವರು ಹುಬ್ಬು,ತಲೆಗೂದಲಲ್ಲದೇ ಕೈಬೆರಳ ತುದಿಯಿಂದಲೂ ಭಾವಭಿವ್ಯಕ್ತಪಡಿಸುವಂತಹ ಕಲೆಬಲ್ಲವರು. ಬ್ರಿಟನ್ನಿನ Black Adder ಕಾಮಿಡಿಯಿಂದಾಗಿ ಮಿಂಚಿದರಲ್ಲದೇ ಜನಪ್ರಿಯರಾದರು. ನಟ ಹಾಗೂ ಬರಹಗಾರಾದ ಇವರು ಎಲೆಕ್ಟ್ರಿಕಲ್ ಇಂಜಿನೀಯರಿಂಗ್ ನಲ್ಲಿ ಬ್ಯಾಚುಲರ್ ಡಿಗ್ರಿಯನ್ನು ನ್ಯೂ ಕ್ಯಾಸಲ್ ಯುನಿವರ್ಸಿಟಿಯಿಂದಲೂ ಹಾಗೂ ಮಾಸ್ಟರ್ಸ್ ಡಿಗ್ರಿಯನ್ನು ಕ್ವೀನ್ಸ್ ಕಾಲೇಜ್, ಆಕ್ಸ್ಫರ್ಡ್ ಇಂದಲೂ ಪಡೆದರು. ಆದರೂ ಒಲವುಮಾತ್ರ ನಟನೆಯತ್ತ. ಹಾಸ್ಯನಟನಾಗಿ ಮಿಂಚಿದರು, ಮಿ.ಬೀನ್ ಆದರು.
ಸುನೇತ್ರಾ ಶಾಸ್ತ್ರಿ ಎಂಬ ಬ್ರಿಟಿಷ್ ಹಿಂದು ಯುವತಿಯನ್ನು ವಿವಾಹವಾದರು. ಇಬ್ಬರು ಮಕ್ಕಳನ್ನು ಹೊಂದಿರುವ ಆಟ್ಕಿನ್ ಸನ್ ಹಾಸ್ಯನಟರಾಗಿ ಹೆಚ್ಚು ಪ್ರಸಿಧ್ಧರಾದವರು. ಹತ್ತುವರ್ಷಕ್ಕಿಂತಲೂ ಪುಟ್ಟಬಾಲಕನ ಮುಗ್ಧತೆಯನ್ನು ತಮ್ಮ ನಟನೆಯೊಳಗೆ ಕಾಣಿಸಬಲ್ಲವರು. ಕೆಲವೊಮ್ಮೆ ‘ಬ್’ ಅಕ್ಷರ ಉಚ್ಛಾರಣೆ ಆಟ್ಕಿನ್ ಸನ್ ಗೆ ಸ್ವಲ್ಪ ಸಮಸ್ಯೆಯೆನಿಸಿದರೂ ಆ ಸಮಸ್ಯೆಯನ್ನು ನಿವಾಳಿಸಿ ಹಾಕಿಬಿಡಬಲ್ಲ ಸಾಮರ್ಥ್ಯ ಅವರ ನಟನೆಗಿದೆ.
೧೯೮೩ರಲ್ಲಿ Dead on Time , ೧೯೭೬ರಲ್ಲಿ Pleasure at Her Majesty's , ೧೯೮೯ರಲ್ಲಿ The Tall Guy, ೧೯೮೩ರಲ್ಲಿ Never Say Never Again ಚಿತ್ರಗಳಲ್ಲಿ ನಟಿಸಿದ ರೊವಾನ್ ೧೯೯೦ರಲ್ಲಿ "Mr. Bean" , ೧೯೭೯ರಲ್ಲಿ "Not the Nine O'Clock News" , ೧೯೮೩ರಲ್ಲಿ "The Black Adder" ಮತ್ತು ೧೯೯೨ರಲ್ಲಿ "Funny Business" ಮುಂತಾದ ಟೀವಿ ಶೋಗಳಲ್ಲಿ ಕಾಣಿಸಿಕೊಂಡರಲ್ಲದೇ ಚಾರ್ಲಿ ಚಾಪ್ಲಿನ್ ಸ್ಥಾನವನ್ನು ತುಂಬುವಲ್ಲಿ ಅಲ್ಪನಿಟ್ಟಿನ ಯಶಸ್ಸುಗಳಿಸಿದ ಕೀರ್ತಿ ಈ ನಟನಿಗೆ ಸಲ್ಲುತ್ತದೆ.
ಮಾತಿಲ್ಲದ ಮಿ.ಬೀನ್ ಭಾವಾಭಿನಯದ ಮಾಯೆಯೊಳಗೆ ಹಲವುಬಾರಿ ಚಾಪ್ಲಿನ್ ಸುಳಿದಾಡಿದಂತೆನಿಸುವುದು ಸುಳ್ಳಲ್ಲ. ಮಿ.ಬೀನ್ ಮುಖವನ್ನು ಹಿಂಡಿಹಿಪ್ಪೆಮಾಡಿ ಭಾವನೆಗಳು ಬಸಿಯುವಾಗ ನಿಜವಾಗಿಯೂ ಆಟ್ಕಿನ್ ಸನ್ ಮುಖಕ್ಕೆ ಮೂಳೆಯೇ ಇಲ್ಲವೇನೋ, ಬರೀ ರಬ್ಬರಿನಿಂದ ಮಾಡಿಟ್ಟ ಮುಖವೇನೋ ಇದು ಎಂಬಷ್ಟು ಆಶ್ಚರ್ಯವಾಗುತ್ತದೆ. ನಟನೆಯೊಳಗಿನ ಆ ಮುಗ್ಧತೆ ಕೆಲವೊಮ್ಮೆ ನಗಿಸಿದರೆ ಕೆಲವೊಮ್ಮೆ ಕನಿಕರ ಹುಟ್ಟಿಸಿ ಕಣ್ಣುಮಂಜಾದರೆ ಪರದೆಯಲ್ಲಿ ಚಾಪ್ಲಿನ್ ಕಾಣಿಸುತ್ತಾರೆ.
ಮರೆಯಾದರೂ ಮಿನುಗುತ್ತಿರುವ ಚಾರ್ಲಿಚಾಪ್ಲಿನ್, ತೆರೆಯಮೇಲೆ ಮಿಂಚುವ ಮಿ. ಬೀನ್ ರಂಥಹ ಹಾಸ್ಯನಟರದು ಬರೀ ನಟನೆಯೆಂದರೆ ಸಾಲದು. ಅದು ಅಂಥಹ ಮಹಾನ್ ವ್ಯಕ್ತಿಗಳನ್ನಷ್ಟೇ ಆರಿಸಿಕೊಂಡು ಒಲಿದಂತಹ ಕಲೆಯೆಂದರೆ ಬರೀ ಒಂದು ಮಾತಾದೀತು. ಇಲ್ಲ. ಅದು ಚಾಪ್ಲಿನ್, ಬೀನ್ ರಂಥವರನ್ನು ಆರಿಸಿಕೊಂಡು ಒಲಿದ ಕಲೆ ಎಂದರಷ್ಟೇ ಸಾಲದು, ಆ ಗಳಿಗೆಯಲ್ಲಿ ವೀಕ್ಷಕರನ್ನು ಆವರಿಸಿಕೊಂಡು ಆಳುವ ಭಾವಾಭಿವ್ಯಕ್ತಿಯ ಬಲೆ. ನಟನೆಯಲ್ಲೂ ನೈಜತೆ.
ಬಲ್ಲವರ ನುಡಿ : ಕನ್ನಡಪ್ರಭದಲ್ಲಲ್ಲ, ‘ಸಖಿ’ ಪಾಕ್ಷಿಕದಲ್ಲಿ ಪ್ರಕಟವಾಗಿತ್ತು ಅಂತ ಬರೀರಿ.

May 9, 2009
ಏಳು ಹೆಜ್ಜೆಗಳನಿಟ್ಟ ಎಂಟು ವರುಷಕ್ಕೆ...
ಪ್ರೀತಿ ಹುಡುಗಾ...
ಅದೆಷ್ಟೋ ದಿನಗಳಾದವು ನಿನಗೊಂದು ಪತ್ರ ಬರೆಯದೆಲೆ. ದಿನಗಳಲ್ಲ, ಅದೆಷ್ಟೋ ವರ್ಷಗಳೇ ಸರಿದುಹೋಗಿದ್ದಾವೆ. ಆವತ್ತು ಪರಸ್ಪರ ಮಾತುಗಳಾಡದೇ ಇರುವಂಥ ದಿನಗಳಲ್ಲೊಂದು ದಿನ ಮತ್ತೆ ಪತ್ರ ಬರೆದಿದ್ದೆ. ಪೋಸ್ಟ್ ಮಾಡಲಿಲ್ಲ. ನಮ್ಮ ಪ್ರೀತಿಯೂ ಇದೀಗ ಕಥೆಯೇ ಆಗುತ್ತಿದೆ ಅಂತ ಭಾವಿಸುತ್ತಿರುವಾಗಲೇ ಅವರೆಲ್ಲ ಸೇರಿ ನಮ್ಮಿಬ್ಬರಿಗೆ ಮದುವೆ ನಿಶ್ಚಯಿಸಿದ್ದರು. ನಿನಗೆ ಖುಷಿಯಾಯಿತ? ಅಂತ ಕೇಳೋಣವೆಂದುಕೊಳ್ಳುವಷ್ಟರಲ್ಲಿ ಮದುವೆ ನಡೆದೇ ಹೋಯಿತು. ಆಗ ಏನನ್ನಿಸಿತೆಂದರೆ ಅದೇ ಈಗಲೂ ಅನ್ನಿಸುತ್ತಿದೆ. ಏನೆಂದರೆ ಸತ್ಯವಾದ ಪ್ರೀತಿಯು ಮೇಲಿನ ಆ ಲೋಕದಲ್ಲಿಯೇ ನಿಶ್ಚಯವಾಗುವ ವಿಚಾರವೆಂದು. ಪ್ರೀತಿಯು ಯಾವುದೇ ನಿರ್ಧಾರ, ನಿಶ್ಚಯಗಳನ್ನು ಕಿತ್ತುಬಿಸಾಕುವಷ್ಟು ಆಳಕ್ಕೆ ಬರೆದಿರಲ್ಪಟ್ಟಿರುತ್ತದೆ ಅನ್ನುವುದಕ್ಕಿಂತ ಮಾಸದ ಹಾಗೆ ಕೆತ್ತಿರಲ್ಪಟ್ಟಿರುತ್ತದೆಯೆಂದು.
ಬೇರೆ ಬೇರೆಯ ಎರಡೂ ಪಯಣದ ಹಾದಿ ಒಂದೇ ಆಗಿ ಎಷ್ಟು ಚೆಂದವಾಗಿ ಸಾಗಿತು. ಇಂಥಹಾದಿಯ ನಿರ್ಮಿಸಿಕೊಂಡ ಹೆಜ್ಜೆಗಳ ಹರಿವನ್ನೇ ಹಿಂಬಾಲಿಸಬೇಕೆಂದು ಇತರರು ಬಯಸುವಷ್ಟು ಚೆಂದದ ಹಾದಿಯಲ್ಲೇ ಬಂದುಬಿಟ್ಟೆವು. ನಿಂತುಸಾಗಿದೆವೇ ಹೊರತು ಪಯಣ ನಿಲ್ಲಿಸಲಿಲ್ಲ. ನಮ್ಮಿಬ್ಬರ ನೋವನ್ನು ನಾವೇ ಹಂಚಿಕೊಂಡೆವು. ನೋವನ್ನು ನಮ್ಮೊಳಗೇ ಹಂಚಿಕೊಳ್ಳುವುದರಲ್ಲಿರುವ ಸುಖ ಬಲ್ಲವನಿಗೇ ಗೊತ್ತು. ನಮ್ಮ ನಡುವಿನ ಪ್ರೀತಿಯೊಳಗಿನ ಒರತೆ ಪ್ರೀತಿಯೊಳಗಿನ ಕೊರತೆಯನ್ನು ಮುಚ್ಚಿಹಾಕುತ್ತಲೇ ಬಂತು. ಮುದ್ದಾಡಲೂ ಇಲ್ಲ, ಕಚ್ಚಾಡಲೂ ಇಲ್ಲ, ಅಂಥ ಪ್ರೀತಿಯೊಂದು ನಮ್ಮನ್ನು ನೇವರಿಸುತ್ತಲೇ ಇತ್ತು. ಹಾದಿಬದಿಯಲ್ಲಿ ನಡೆವಾಗಲೂ ಚೆಂದದೊಂದು ಹಕ್ಕಿಜೋಡಿಯಾಗಿಯೇ ಹಾರಿದೆವು. ಯಾರೂ ನಮ್ಮನ್ನು ನೋಡಿ ನಗಲಿಲ್ಲ. ಪ್ರೀತಿಸಲೇ ಗೊತ್ತಿರದವರು ಒಂದಿಷ್ಟು ಪ್ರೀತಿಸುವುದ ಕಲಿತರು, ಇಷ್ಟು ಸಾರ್ಥಕ್ಯ ಇಡಿಯ ಬದುಕಿಗೆ ಸಾಕಲ್ಲವೇ?
ವಿದ್ಯಾಭ್ಯಾಸವನ್ನು ಇನ್ನಷ್ಟು ಮುಂದುವರೆಸಬೇಕೆಂದಿದ್ದ ನೀನು ಒಂದುಹಂತಕ್ಕೆ ಓದನ್ನು ನಿಲ್ಲಿಸಿದ್ದು ನನಗಾಗಿ ಮಾತ್ರ ಎನ್ನುವುದು ನನಗೂ ಗೊತ್ತಿದೆ. ವಿದ್ಯಾಭ್ಯಾಸದ ಬಗೆಗಿನ ಕೆಲ ಕನಸುಗಳೆಲ್ಲ ಉದ್ಯೋಗದತ್ತ ವಾಲುವಂತಾಗಿದ್ದು ನನ್ನಿಂದಲೆ ಎಂಬ ಬೇಸರವೇನೂ ನನ್ನೊಳಗಿಲ್ಲದ್ದಕ್ಕೆ ಕಾರಣ ಬದುಕನ್ನು ಚೆಂದವಾಗಿ ರೂಪಿಸಿಕೊಳ್ಳಬಲ್ಲಷ್ಟು ವಿದ್ಯಾರ್ಹತೆಯನ್ನಾಗಲೇ ನೀ ಗಳಿಸಿಕೊಂಡಿದ್ದೆ ಎಂಬುದೂ ಸುಳ್ಳಲ್ಲ. ಆದರೀಗ ಪುಸ್ತಕದ ಜ್ಞಾನ ಮಾತ್ರವಲ್ಲದೇ ಬದುಕಿದ ಅನುಭವ ಹೆಚ್ಚು ಪ್ರಯೋಜನವೆಂಬ ಅರಿವು ನಿನ್ನ ಕಣ್ಣುಗಳಲ್ಲಿದೆಯಲ್ಲ ಅಷ್ಟು ಸಾಕು ನನಗೆ. ಪ್ರೀತಿ ಮತ್ತು ವಿದ್ಯಾಭ್ಯಾಸವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತ ಸಮತೋಲನ ಕಾಪಾಡುವಲ್ಲಿ ಹೆಣಗಾಡಿದ್ದಂತೂ ಸತ್ಯ. ಆ ಹೆಣಗಾಟಕ್ಕೊಂದು ಯಶಸ್ಸು ಸಿಕ್ಕಿದ್ದು ಇನ್ನಷ್ಟು ಸತ್ಯ. ಪ್ರೀತಿಯನ್ನು ಉಳಿಸಿಕೊಳ್ಳುವಲ್ಲಿ ಇಬ್ಬರ ವಿದ್ಯಾಭ್ಯಾಸಕ್ಕೊಂದು ಸಾರ್ಥ್ಯಕ್ಯ ಸಿಕ್ಕಿದೆಯೆಂಬ ಖುಷಿ ಮಾಸುವುದಿಲ್ಲ.
ಕಾಲಿಗೆ ಅಂಟಿದ ಮುಳ್ಳನ್ನು ಪ್ರೀತಿಯಿಂದಲೇ ಮುಳ್ಳಿಗೂ ನನಗೂ ನೋವಾಗದ ತೆರನಾಗಿ ತೆಗೆಯುವಾಗ ಅಲ್ಲೊಂದು ಪ್ರೀತಿಯ ಅನುಭವವೇ ನನಗಾಗುತ್ತದೆ. ಆ ಮುಳ್ಳನ್ನೂ ಬಿಸಾಡದೆಲೆ ಆದಷ್ಟು ದೂರ ಕೈಯಲ್ಲಿಟ್ಟುಕೊಂಡು ಕ್ರಮಿಸುತ್ತೇನಲ್ಲ, ಹೀಗಿರುವಾಗ ನನಗಿಂತ ಹೆಚ್ಚಾಗಿ ನನ್ನ ಪ್ರೀತಿಸುವ ನಿನ್ನ ಪ್ರೀತಿಸದೇ ಹೇಗಿರಲಿ ಹೇಳು.
ಜೊತೆ ಸಾಗಿದ ಪಯಣದ ಪ್ರತಿ ಹಂತದ ಹೆಜ್ಜೆಗಳೂ ನನ್ನೊಳಗೆ ಆಗಾಗ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತವೆ. ತಪ್ಪುವ ತಾಳ ಮತ್ತೆ ಸರಿಯಾಗುವ ಸದ್ದು ಮನಸ್ಸಿಗೆ ಮುದಕೊಡುತ್ತದೆ. ನಿನ್ನ ಸಹನೆಯ ಲಯದೊಳಗೆ ನಾನು ಸದಾ ತಣ್ಣಗೆ ಹಾಡೊಂದನ್ನು ಗುನುಗುಡತ್ತಲೇ ಇದ್ದದ್ದು ನಿನಗೆ ಕೇಳಿಸುತ್ತಲಿದೆಯೆಂಬುದೇ ಅತ್ಯಂತ ಖುಷಿ. ಇಬ್ಬರೂ ಜತೆಯಲ್ಲಿರುವಾಗ ಬೆಟ್ಟದ ತುದಿಯಲ್ಲಿನ ಮೋಡ ಹಿಡಿಯುವುದೇನೂ ಕಷ್ಟವಲ್ಲ ಅಂತ ಗೊತ್ತಾಗಿದೆಯಲ್ಲ,ಜತೆಯಲ್ಲೇ ಬರುತ್ತೇನೆ ಮುಂದೆ ಸಾಗು. ಹಿಂದೆ ಇದ್ದುಕೊಂಡು ನಿನ್ನ ಹಿಂದೆಳೆಯುವ ಮನದಿಂದಲ್ಲ, ನಿನ್ನ ಬೆನ್ನಿಗಾಸರೆಯಾಗಿ ಬರುತ್ತೇನೆ. ನೀನು ನನ್ನ ಕೈಹಿಡಿದು ಮುಂದೆಳೆದುಕೊಂಡು ಹೋಗುತ್ತಿರು.ಯಾವ ಮೋಡ ಬೇಕಂತ ನಾನು ನಿನಗೆ ಹೇಳುತ್ತೇನೆ, ಆ ಮೋಡ ಹಿಡಿಯುವುದು ಕಷ್ಟವಾದರೊಮ್ಮೆ ನಿಂತು ದಣಿವಾರಿಸಿಕೋ, ನನ್ನ ಮನದ ಬೊಗಸೆಯಲ್ಲಿ ನಿನ್ನ ದಣಿವಾರಿಸಲಿಕ್ಕಾಗಿಯೇ ಒಂದಿಷ್ಟು ನೀರು ಸದಾ ಜಿನುಗುತ್ತಿರುತ್ತದೆ. ಸುಸ್ತಾದರೆ ಈ ಮಡಿಲು ಅಮ್ಮನ ಮಡಿಲಿನಷ್ಟೇ ಮೃದುವೆನ್ನುವುದನ್ನು ಮರೆಯಬೇಡ. ಒಂದಿಷ್ಟು ಹೊತ್ತು ವಿರಮಿಸು. ಜೊತೆಯಲ್ಲಿಯೇ ಇದ್ದೇನೆ.
ಇವತ್ತಷ್ಟೇ ಪ್ರಪೋಸ್ ಮಾಡಿಕೊಂಡ ಪ್ರೇಮಿಗಳ ಹಾಗೆ ಎಲ್ಲಿದ್ದರೂ ಜತೆಯಾಗಿರುತ್ತ, ನಾಳೆಯೇ ಡಿವೋರ್ಸ್ ಕೊಟ್ಟುಕೊಳ್ಳುವ ಗಂಡಹೆಂಡಿರ ಹಾಗೆ ಜಗಳಾಡುತ್ತ,ಭಾರತ ಪಾಕಿಸ್ತಾನದಂಥ ಭಿನ್ನಾಭಿಪ್ರಾಯಗಳ ನಡುವೆಯೂ ಒಂದೇ ನಿರ್ಧಾರ ತೆಗೆದುಕೊಳ್ಳುತ್ತ, ಒಂದೇ ತರಗತಿಯಲ್ಲಿ ಇಪ್ಪತ್ತು ವರ್ಷ ಓದಿದ ಸ್ನೇಹಿತರ ಹಾಗೆ ಬಡಿದಾಡುತ್ತ, ಒಂದೇ ಗೂಡಿನಲ್ಲಿ ಬೆಳೆದ ಹಕ್ಕಿಗಳ ಹಾಗೆ ಕಿಚಪಿಚಗುಡುತ್ತ, ಜೊತೆಯಾಗಿದ್ದು ಯಶಸ್ವಿಯಾಗಿ ಎಂಟು ವರ್ಷ ಪೂರೈಸಿದ ನಮಗೆ ಶುಭಾಶಯಗಳು ಹುಡುಗಾ...
ನಾವು ಜೊತೆಯಾಗಿ ಪಯಣಿಸಲಾರಂಭಿಸಿ ಇಂದಿಗೆ ಎಂಟುವರ್ಷಗಳಾದವು ಹುಡುಗಾ. ‘ಎಲ್ಲಿಗೆ ಪಯಣ?’ ಅಂತ ನಮ್ಮನ್ನು ಯಾರೂ ಕೇಳಲಿಲ್ಲ. ಕೇಳಿದರೆ ನಮಗದು ಗೊತ್ತೂ ಇಲ್ಲ. ನೀ ಕೊಟ್ಟ ಬಾಡದ ಹೂವು ನನ್ನೊಂದು ಕೈಯಲ್ಲಿದೆ. ನನ್ನೀ ಬಲಗೈ ನಿನ್ನ ಕೈಯೊಳಗಿದೆ.
" ಕರುಣಾಳು ಬಾ ಬೆಳಕೆ
ಮುಸುಕಿದೀ ಮಬ್ಬಿನಲಿ
ಕೈಹಿಡಿದು ನಡೆಸೆನ್ನನು"
ನಿನ್ನ ಪಯಣದ ಹಾದಿ ನನ್ನ ಅಂಗೈಯೊಳಗಿದೆಯೆಂಬ ನಿನ್ನ ನಂಬಿಕೆ ಸುಳ್ಳಾಗದಿರಲಿ. ಪಯಣಕ್ಕೆ ಜತೆಯಾದ ನಿನಗೆ ಧನ್ಯವಾದ ಮತ್ತು ವಂದನೆ.
ಜಗಳಾಡಬೇಕೆನ್ನಿಸಿ ದಾರಿಮಧ್ಯದಲ್ಲಿಯೇ ನಿಲ್ಲಿಸಿ ಜಗಳಾಡಿದ್ದಕ್ಕೆ, ಬೈಕಲ್ಲಿ ಹಿಂದೆ ಕುಳಿತವರಿಗೂ ಹೆಲ್ಮೆಟ್ ಖಡ್ಡಾಯವಾಗಿದ್ದಾಗ ಫೋಲೀಸಿನವ ಬಂದ ಅಂತ ಬೈಕ್ ರೈಡ್ ಮಾಡ್ತಿದ್ದ ನಿನ್ನ ಹೆಲ್ಮೆಟ್ ತೆಗೆದು ನಾನು ಧರಿಸಿದ್ದನ್ನು ಕಂಡು ಪೋಲೀಸಿನವ ನಕ್ಕಿದ್ದಕ್ಕೆ, ಜೋರುಮಳೆ ಬರೋಕೆ ಶುರುವಾದಾಗ ನಿನ್ನ ಜರ್ಕಿನ್ ನಾನು ಧರಿಸಿದ್ದಕ್ಕೆ, ಹೊಟೆಲ್ ಅಲ್ಲಿ ನಿನ್ನ ಪ್ಲೇಟಿನಲ್ಲಿದ್ದದ್ದನ್ನೇ ಹೆಚ್ಚು ತಿಂದಿದ್ದಕ್ಕೆ, ಡ್ರೈವ್ ಮಾಡೋವಾಗ ನಿನ್ನ ಕನ್ನಡಕ ತೆಗೆದು ನಾನು ಹಾಕ್ಕೊಂಡು ನಿಂಗೆ ಮುಂದಿನ ದಾರಿಯೇ ಕಾಣದಂಗೆ ಮಾಡಿದ್ದಕ್ಕೆ, ನೀ ಉಪಯೋಗಿಸುವ ಕಂಪ್ಯೂಟರ್ರೇ ಬೇಕು,ನೀನು ಓದ್ತಿರೋ ಪುಸ್ತಕಾನೇ ಬೇಕು, ನೀ ಕುಡೀತಿರೋ ಟೀ ಕಪ್’ಏ ಬೇಕು ಅಂತೆಲ್ಲ ನಿನ್ನ ಗೋಳಾಡಿಸುವುದಕ್ಕೆ, ಖರ್ಜೂರ-ಹಲಸಿನ ಹಣ್ಣುಗಳಂಥವನ್ನು ತಿಂದು ಅವುಗಳ ಬೀಜವನ್ನ, ಜೋಳ ತಿಂದು ಉಳಿದ ಅದರ ಭಾಗವನ್ನ, ಟೀ ಕುಡಿದ ಖಾಲೀ ಕಪ್ಪನ್ನು ನಿನ್ನ ಕೈಗಿತ್ತಂಥ ಖಾಯಂ ತಪ್ಪುಗಳಿಗೆಲ್ಲ ಯಾವತ್ತಿನಂತೆ ನಿನ್ನ ಒಪ್ಪಿಗೆಯಿರಲಿ. ಇವಕ್ಕೆಲ್ಲ ಪಕ್ಕದಲ್ಲೊಂದು ಪುಟ್ಟ ಕ್ಷಮೆಯೂ ಇರಲಿ.
ಇಂಥದೊಂದು ದಿನದಂದು ಇಬ್ಬರಿಗೂ ದೇವನು ಮತ್ತೆ ಒಳ್ಳೆಯದನ್ನೇ ಮಾಡುತ್ತಾನೆಂಬ ಯಾವತ್ತಿನ ಅದೇ ಭರವಸೆಯಲ್ಲಿ...
ಎಲ್ಲರಿಗೂ ಎಲ್ಲವೂ ಇನ್ನಷ್ಟು ಒಳಿತಾಗಲಿ.
ಪ್ರೀತಿಯಿಂದ,
-ಹುಡುಗಿ

May 3, 2009
ಕನಸುಗಳ ನೆನಪು
ಸುಮಾರು ಆರು ತಿಂಗಳಿನಷ್ಟು ಹಿಂದೆಯೇ ನಡೆದದ್ದಿದು.
ನಾನು ಸಾಹಿತಿಯೊಬ್ಬರ ಕಾರಿನ ಡ್ರೈವರ್ ಆಗಿದ್ದೆ. ಸಾಹಿತಿಗಳು ಬಂದು 'ಏನೋ ಹೇಳ್ತೀನಿ ಟೈಪ್ ಮಾಡು, ಯಾಕೋ ಟೈಪ್ ಮಾಡೋಕ್ ಆಗ್ತಿಲ್ಲ' ಅಂದರು. ‘ಸರಿ ಸಾರ್, ಟೈಪ್ ಮಾಡಿಕೊಡ್ತೀನಿ’ ಅಂತ ಟೈಪ್ ಮಾಡೋಕೆ ಶುರು ಮಾಡಿದೆ. ಸಾಹಿತಿಗಳು ತುಂಬ ಫಾಸ್ಟಾಗಿ ಹೇಳಿದ್ದರಿಂದ ಅವರು ಹೇಳಿದ್ದನ್ನೆಲ್ಲ ಟೈಪ್ ಮಾಡೋಕೆ ಆಗ್ಲಿಲ್ಲ ನನ್ ಹತ್ರ. ನಾನು ತುಂಬ ಸ್ಲೋ ಟೈಪ್ ಮಾಡಿದ್ದರಿಂದ ಸಾಹಿತಿಗಳಿಗೆ ಬೇಸರವಾಗಿ ತಾವೇ ಎಲ್ಲವನ್ನೂ ಸರಸರನೆ ಟೈಪ್ ಮಾಡಿಕೊಂಡ್ರು.
ಅಬ್ಬಾ! ಅಷ್ಟರಲ್ಲಿ ಎಚ್ಚರವಾಯ್ತು! ಕನಸು ಅಂತ ಗೊತ್ತಾದಾಗ ಎಷ್ಟು ನಿರಾಳವಾಗತ್ತಲ್ವ?
**********
ಸ್ವಲ್ಪ ದಿನಗಳ ನಂತರದಲ್ಲಿ ಮತ್ತೊಂದು ಕನಸು ಬಿದ್ದಿತ್ತು. ನನ್ನದೊಂದು ಕಥಾಸಂಕಲನ ಬಿಡುಗಡೆ ಸಮಾರಂಭ. ಹಾಲ್ ಅಲ್ಲಿ ನಾವೊಂದಿಷ್ಟು ಕೆಲವೇ ಜನರು ಸೇರಿದ್ದೇವೆ. ನಾನು ಸಾಹಿತಿಯೊಬ್ಬರ ಹತ್ತಿರ ‘ಸಂಕಲನಕ್ಕೆ ನೀವೇ ಮುನ್ನುಡಿ ಬರೆಯಬೇಕು ಸಾರ್’ ಅಂತ ಗೋಗರೆಯುತ್ತಿದ್ದೇನೆ. ಅಲ್ಲಿಯೇ ಪಕ್ಕದಲ್ಲಿದ್ದ ಮತ್ತೊಬ್ಬರು ಸಾಹಿತಿಗಳು ‘ನಾನೇ ಮುನ್ನುಡಿ, ಬೆನ್ನುಡಿ, ಎರಡನ್ನೂ ಬರೆಯೋದು’ ಅಂತ ಹೇಳ್ತಿದ್ದಾರೆ.
ಆ ಕಡೆ ಪಕ್ಕದಲ್ಲಿ ನಮ್ಮಮ್ಮ ಒಂದು ಟೇಬಲ್ ಮುಂದಿಟ್ಟುಕೊಂಡು ಖುರ್ಚಿಯಲ್ಲಿ ಕುಳಿತಿದ್ದಾರೆ. ಪುಟ್ಟಪುಟ್ಟ ಕಾಗದದ ಚೀಟಿಯಲ್ಲಿ ಏನನ್ನೋ ಬರೆದು ಬರೆದು ಬಂದವರಿಗೆಲ್ಲ ಕೊಡ್ತಿದಾರೆ.
ಅಷ್ಟರಲ್ಲಿ ಎಚ್ಚರವಾಯ್ತು.
ಈ ಎರಡನೇ ಕನಸು ಬಿದ್ದಾಗ ಮಾತ್ರ ಎಚ್ಚರವಾದಾಗ ಸುಧಾರಿಸಿಕೊಳ್ಳೋಕೆ ಸುಮಾರು ಸಮಯವೇ ಬೇಕಾಯ್ತು. ಆದ್ರೆ ಆವತ್ತು ಇಡೀ ದಿನದಲ್ಲಿ ಈ ಕನಸು ನೆನಪಾಗಿ ನನ್ನಷ್ಟಕ್ಕೇ ನಕ್ಕಿದ್ದೇನೆ. ಮೂರ್ನಾಲ್ಕು ಬಾರಿ ಗೆಳೆಯನೊಂದಿಗೂ ಹೇಳಿ ನಕ್ಕಿದ್ದೇನೆ. ಇಷ್ಟು ದುಬಾರಿ ಕನಸು ಬಿದ್ದಿರುವುದನ್ನು ಬಾರಿ ಬಾರಿಗೆ ಹೇಳಿದರೆ ಯಾವ ಗೆಳೆಯ ತಾನೆ ಎಷ್ಟು ಬಾರಿ ನಕ್ಕಾನು!
ನನಗೆ ನಗು ಬಂದದ್ದು ಬೇರಾವುದಕ್ಕೂ ಅಲ್ಲ. ಎಷ್ಟು ವಿಚಿತ್ರ ಕನಸುಗಳು ಬೀಳುತ್ತವೆ ಅಂದ್ರೆ...ಅಬ್ಬಾ! ಪುಸ್ತಕ ಬಿಡುಗಡೆಯ ಸಮಾರಂಭದ ದಿನ ಸಮಾರಂಭದ ಹಾಲಿನಲ್ಲಿ ಅದೇ ಪುಸ್ತಕಕ್ಕೆ ಮುನ್ನುಡಿ ಬರೆಸಿಕೊಳ್ಳುತ್ತಿದ್ದ ನನ್ನನ್ನೇ ನೋಡಿ ನಂಗೆ ನಗು.
ನಮ್ಮಮ್ಮ ಅಲ್ಲಿ ಕೂತ್ಕೊಂಡು ಚೀಟಿಯಲ್ಲಿ ಎಲ್ಲರಿಗೂ ಅದೇನನ್ನೋ ಬರೆದುಕೊಡ್ತಿದ್ದರಲ್ಲ, ಅದೇನಾಗಿರಬಹುದು ಅನ್ನೋ ಕುತೂಹಲ ಮಾತ್ರ ಇನ್ನೂ ಆಗಾಗ ಮತ್ತೆ ಮತ್ತೆ ಕಾಡತ್ತೆ. ‘ಖಂಡಿತ ಯಾರೂ ಈ ಪುಸ್ತಕ ತಗೋಬೇಡಿ’ ಅಂತ ಬರೆದುಕೊಟ್ಟಿರಬಹುದಾ? ಅಂತ ನನ್ನ ಸಂಶಯ. ಯಾಕೇಂದ್ರೆ ಜನರಿಗೆ ಮಾತ್ರ ಮೋಸವಾಗ್ಬಾರ್ದು ಅನ್ನೋ ನಮ್ಮಮ್ಮನ ಕಳಕಳಿ ನನ್ನ ಕನಸಲ್ಲಿಯೂ ಜಾಗೃತವಾಗಿರಬೇಕು.

Subscribe to:
Posts (Atom)